¡Sorpréndeme!

ಕಾಮತರ ಎಳನೀರು 'ಮಲಾಯಿ ಐಸ್ ಕ್ರೀಮ್'ಗೆ ಮಾರು ಹೋದ ಮಂಗಳೂರಿಗರು | Oneindia Kannada

2018-02-13 884 Dailymotion

ಮಂಗಳೂರು, ಫೆಬ್ರವರಿ 13: ಬಾಯಾರಿದಾಗ ಎಳನೀರು ಸಿಕ್ಕಿದರೆ ಅದಕ್ಕೆ ಸಾಟಿಯಾಗುವಂಥ ಪಾನೀಯ ಇನ್ನೊಂದಿಲ್ಲ. ಇದೇ ಎಳನೀರಿಗೆ ಮಂಗಳೂರಿನ ನಿವೃತ್ತ ಇಂಜಿನಿಯರ್ ಹೊಸ ಸ್ವಾದ ನೀಡಿದ್ದಾರೆ. ಎಳನೀರಿನ ಗಂಜಿಗೆ ಐಸ್ ಕ್ರೀಮ್ ಬೆರೆಸಿ ತಯಾರು ಮಾಡುವ ಈ ಹೊಸ ತಿನಿಸಿನ ರುಚಿಗೆ ಮಂಗಳೂರಿಗರೇ ಫಿದಾ ಆಗಿದ್ದಾರೆ. ಇದರ ರುಚಿ ಅಂತಿಂಥ ರುಚಿಯಲ್ಲ. ನೀವೆಲ್ಲೂ ಕಂಡಿರದ ರುಚಿರುಚಿಯಾದ ಮಲಾಯಿ ಐಸ್ ಕ್ರೀಮ್ ಇದು. ಮಂಗಳೂರಿನ ಪುಟ್ಟ ಅಂಗಡಿಯಲ್ಲಿ ಈ ಐಸ್ ಕ್ರೀಂ ರೆಡಿಯಾಗುತ್ತದೆ. ಸ್ಟ್ರಾಬೆರಿ, ಚಾಕ್ಲೇಟ್, ಪೈನಾಪಲ್, ಮೂಸಂಬಿ ಹೀಗೆ ಹತ್ತಕ್ಕೂ ಮಿಕ್ಕಿದ ಫ್ಲೇವರ್ ಗಳಲ್ಲಿ ತಯಾರಿಸೋ ಮಲಾಯಿ ಐಸ್ ಕ್ರೀಮ್ ರುಚಿ ಒಮ್ಮೆ ನೋಡಿದರೆ ಸಾಕು ಎಂಥವರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.